Skip to main content

Posts

Showing posts from July, 2017

ನೆಂಟರ_ಸಂಕಟ

# ನೆಂಟರ_ಸಂಕಟ ದೂರ ನಿಂತು ದೂರದಿರಿ, ಹತ್ತಿರ ಬಂದು ಹಾರದಿರಿ, ಕೆಳಗೆ ನಿಂತು ಎಳಯದಿರಿ, ಮೇಲೆ ನಿಂತು ತಿವಿಯದಿರಿ, ಜೊತೆಲೇ ಇದ್ದು ಗೊಣಗದಿರಿ, ಬುದ್ಧಿಹೇಳಿ ಅನ್ನದಿರಿ, ಮೀಡಿಯಾ ಕೆಲಸ ಮಾಡದಿರಿ, ಆಗಿ ನೀವು ಮಾದರಿ. ..ಕೇಶವ ಕಶ್ಯಪ್

ಕಾಗೆ ನೀ ಎಲ್ಲಿಗೆ ಹೋದೆ ಸುಮ್ಮನೆ ಹಾಗೆ

ಕಾಗೆ ನೀ ಎಲ್ಲಿಗೆ ಹೋದೆ ಸುಮ್ಮನೆ ಹಾಗೆ.. ಪಕ್ಷ ಬಂದರೆ ಬರಿ ನಿನ್ನಯ ಕೂಗೆ, ಇಲ್ಲದಿದ್ದರೆ ನೀ ಇದ್ದರು ಇಲ್ಲದ ಹಾಗೆ, ನಿನ್ನ ಬಣ್ಣ ಕಪ್ಪು ಅದರಲ್ಲೇನಿದೆ ನಿನ್ನ ತಪ್ಪು? ನೀ ಮನೆಮುಂದೆ ಕೂಗಿದರೆ ನೆಂಟರು ಬಂದಹಾಗೆ, ನೀ ನೆತ್ತಿಯ ಮೇಲೆ ಕುಟುಕಿದರೆ ಮನೆಮುಂದೆಯೇ ಹೊಗೆ. ಹಾಗೆ ಹೀಗೆ.... ಕಾಗೆ ನೀ ಎಲ್ಲಿಗೆ ಹೋದೆ ಸುಮ್ಮನೆ ಹಾಗೆ... ಮೋಬೈಲ್ ತರಂಗಗಳಿಗೆ ಸೋತು ಹೋದೆಯೋ, ವಿದ್ಯುತ್ ತಂತಿಗಳ ಮೇಲೆ ಸತ್ತು ಹೋದೆಯೋ, ನೀರಿಲ್ಲದೆ ನಿತ್ರಾಣನಾಗಿ ಹೋದೆಯೋ, ಕಾಗೆ ನೀ ಎಲ್ಲಿಗೆ ಹೋದೆ ಸುಮ್ಮನೆ ಹಾಗೆ..... -ಕೇಶವ (ಕೆ.ಪಿ)
ಯೋಗಿ ಇಂದ ಬಂತು ಗೋವಿಗೆ ಯೋಗ, ಕಸಾಯಿಖಾನೆಗೆ ಬೀಗ. ತ್ಯಾಗ ಜೀವಿ ಗೋವಿಗಿಲ್ಲವೆ ಚೂರು ಜಾಗ, ಬೇಗ ಹರಡಲಿ ಎಲ್ಲಾ ಕಡೆ ಇದೇ ರಾಗ

#What's on your mind?

# What 's on your mind? Social mediaಗಳ ತುಂಬ ದೊಂಬಿ, Live ಬಂದು ಎಲ್ಲರೂ ಹಾಡಿದರು ಎದೆ ತುಂಬಿ. ಕಿಕ್ಕಿರಿದು ನಿಂತ status updateಗಳು, Likes ಹಾಗು commentsಗಳಿಗಾಗಿ ಹಾತೊರೆಯುತ್ತಿರುವ contentಗಳು. YouTube ತುಂಬ video bloggerಗಳ ಹಾವಳಿ, ಎಲ್ಲರೂ ಅವರವರ channel subscribe ಮಾಡಲು ಕಳಕಳಿ. ಊಟದ ಮಧ್ಯ WhatsApp msgಗಳ notification, ಅಂತರ್ಜಾಲದಲ್ಲಿ ಮುಳುಗಿದೆ ಈಗಿನ generation. Jio ಇಂದ ಕಡಿಮೆಯಾಯಿತು ಅಂತರ್ಜಾಲದ ಅಂತರ, Google, WhatsApp, Facebookಗಳು ನಿಂತರೆ ಏನಂತೀರಾ...? Reality showಗಳಲ್ಲಿ ಮಾಡಿ ಕಿರಿಕಿರಿ, ಆಚೆ ಬಂದ ಮೇಲೆ mediaಗಳಲ್ಲಿ ನಿಮ್ಮದೇ ಸವಾರಿ. ಸಂಗೀತ showಗಳಲ್ಲಿ ಸಂಗೀತಕ್ಕಿಂತ comedyಗೇ ಹೆಚ್ಚು ಆದ್ಯತೆ, Entertainment ಜಗತ್ತಿನಲ್ಲಿ ಈ ಎಲ್ಲದಕ್ಕೂ ಇದೆ ಮಾನ್ಯತೆ.... ....ಕೇಶವ

#ಚಪ್ಪಾಳೆ

# ಚಪ್ಪಾಳೆ ಚಪ್ಪಾಳೆ ಹೊಡುದ್ರೆ.. ಕಾಸು ಕೊಡಬೇಕು. ಚಪ್ಪಾಳೆ ಹೊಡೆಯೋದಕ್ಕೆ.. ಕಾಸು ಕೊಡಬೇಕು. ಕಾಸು ಕೊಟ್ಟು ಚಪ್ಪಾಳೆ ಹೊಡಿಬೇಕು. ಎಲ್ಲವೂ ನಾವೇ ಕೆಲವು ವೃತ್ತಿ ಧರ್ಮ ಇನ್ನೂ ಕೆಲವು ಪ್ರವ್ರತ್ತಿಯ ಕರ್ಮ ಉಳಿದವು ಗೌರವಕ್ಕೆ ಸಮ. ....ಕೇಶವ

#ಭವಿಷ್ಯ

# ಭವಿಷ್ಯ ಟಿ.ವಿ ಹಾಕಿದ್ರೆ ನಿತ್ಯ ಭವಿಷ್ಯ ಪೇಪರ್ ತೆಗೆದ್ರೆ ವಾರ ಭವಿಷ್ಯ ಪಂಚಾಂಗ ಓದಿದ್ರೆ ವರ್ಷ ಭವಿಷ್ಯ ಆದ್ರೆ... ವರ್ಷಕ್ಕೆ ಇಲ್ಲ ಭವಿಷ್ಯ ವಾರಕ್ಕಂತು ಏಳೇ ದಿನ ಭವಿಷ್ಯ ದಿನಕ್ಕಂತು ಗಂಟೆಗಳಲ್ಲೇ ಮುಗಿಯತ್ತೆ ಭವಿಷ್ಯ.. ಕಾಲ ಹರಣ.... ಭವಿಷ್ಯ ಮರಣ... ....ಕೇಶವ

#ಧೂಮಪಾನ_ಹಾನಿಕಾರ

# ಧೂಮಪಾನ_ಹಾನಿಕಾರ ಸೇದಿ ಸೇದಿ ಎಸೆದೆ ಸಿಗರೇಟು, ಈಗ ಊರಲ್ಲೆಲ್ಲ ಬರೀ ಘಾಟು. ಅವನು ಸೇದಲೇ ಇಲ್ಲ, ಆದರೂ ಬಂತು ಅವನಿಗೆ ಕ್ಷಯ, ಅದಕ್ಕೆ ನಾನೇನು ಮಾಡಲಯ್ಯಾ.. ನಾ ಮಾಡಿದ್ದೊಂದೇ ತಪ್ಪು, ಸೇದಿದ್ದು ಹೊಗೆಸೊಪ್ಪು. ಅದಕ್ಕೆ ವೈದ್ಯರು ಅಂದ್ರು, ಮಾಡ್ಕೋಬೇಡ ಮಂಡೆ ಬಿಸಿ, ಮಾಡ್ಬೇಕು ನಿನ್ನ ಕರುಳಿಗೆ ಕಸಿ. ....ಕೇಶವ

#ವೃದ್ದಾಪ್ಯ.

# ವೃದ್ದಾಪ್ಯ . ಆಯಿತು ವಯಸ್ಸು, ಮಾಗಿತು ಮನಸು, ಕರಗಿತು ಕನಸು, ಎಲ್ಲಿ ಹೋಯಿತು ಆ ನನ್ನ ಕೂಸು, ಅರಸಿ ಹೊರಟಿತೇ ಕಾಸು!! ಈ ಮುಪ್ಪಿಗೆ ಬೇಕಂತೆ ನಿನ್ನ ಅಪ್ಪುಗೆ, ಈ ವೃದ್ದಾಪ್ಯ ಬಯುಸುತಿದೆ ನಿನ್ನ ಸಾನಿಪ್ಯ ಎಲ್ಲಿರುವೆ, ಹೇಗಿರುವೆ, ಬಂದು ಬಿಡು ಮಗು, ಕಾಣಬೇಕೆನಿಸುತಿದೆ ನಿನ್ನ ಮುದ್ದು ನಗು. ಬಿಟ್ಟು ಬಿಡು ಆ ವಿದೇಶದ ಒಲವು, ಸೇರಿ ನಲಿಯೋಣ ಸಾಯುವ ಮುನ್ನ ಗಂಟೆಗಳಾದರು ಕೆಲವು. ಕೇಳಿಸುತ್ತಿಲ್ಲವೇ ನಿನಗೆ ಈ ಕರುಳಿನ ಕರೆ, ಕಾಯುತಿರುವೆ ನಿನಗಾಗಿ ಬಿಗಿಹಿಡಿದು ಉಳಿದಿರುವ ಈ ಉಸಿರಿನ ಕೊರೆ. --ಕೇಶವ

#ಕನಸು

# ಕನಸು ರಾತ್ರಿ ಕಂಡ ಕನಸು ಹಗಲಾಗುವುದರಲ್ಲಿ ಏಕೋ ಮರೆತೆ, ಹಗಲು ಕಂಡ ಕನಸು ನನಸಾಗುವ ಮುನ್ನ ಏಕೋ ಸರಿದೆ. ಈಗ ಪರರ ಕನಸಿನ ಕಟ್ಟಡಕ್ಕೆ ಇಟ್ಟಿಗೆಯಾದೆ, ಆ ಕಟ್ಟಡದೊಳಗೆ ನನ್ನ ಕನಸು ಕಾಣಲು ಪ್ರಯತ್ನಿಸಿದೆ. ನನ್ನ ಕನಸು ಈಡೇರುವ ಮುನ್ನವೇ ಕಟ್ಟಡ ಕುಸಿದಿದೆ, ನಾ ಕಂಡ ಕನಸು ಚೂರಾಗಿದೆ, ಚೂರಾದ ಕನಸಿನಲ್ಲಿದ್ದ ಆಪ್ತರ ಕನಸು ಅಸುನೀಗಿದೆ. -ಕೇಶವ

#ಜಿಜ್ಞಾಸೆ

# ಜಿಜ್ಞಾಸೆ ಪ್ರಾಣ ಹಿಂಡುತಿದೆ ಕಾಣದ ಕೈಗಳು, ಹೃದಯ ಕಲಕುತಿದೆ ಮರೆಯದ ನೆನಪುಗಳು. ಕನಸು ತಿವಿಯುತಿದೆ ತೀರದ ಆಸೆಗಳು, ಇರುವುದನ್ನು ಇಷ್ಟಪಡಲೇ? ಸಿಗದುದ್ದಕ್ಕೆ ಕಷ್ಟಪಡಲೇ?.... .....ಕೇಶವ

#ತಾಯಿ_ಪ್ರಕೃತಿ

# ತಾಯಿ_ಪ್ರಕೃತಿ ಮೋಡದ ಗರ್ಭದೊಳಗೆ ಮಳೆಯ ಹುಟ್ಟು, ಭೂಮಿಯ ಗರ್ಭದೊಳಗೆ ಬೆಳೆಯ ಹುಟ್ಟು, ತಾಯಿಯ ಗರ್ಭದೊಳಗೆ ಜೀವದ ಹುಟ್ಟು. ಮಳೆ ಇಲ್ಲದೆ ಬೆಳೆ ಇಲ್ಲ, ತಾಯಿ ಇಲ್ಲದೆ ಜೀವಿ ಇಲ್ಲ, ಮಳೆ ಬೆಳೆ ಇಲ್ಲದೆ ರೈತನ ಆತ್ಮಕ್ಕೆ ಸಾವು, ಮಕ್ಕಳ ಪ್ರೀತಿ ಇಲ್ಲದೆ ತಾಯಿಯ ಆತ್ಮಕ್ಕೆ ನೋವು. ನೀರು ಉಳಿಸಿ ಕಣ್ಣಿನಲ್ಲಲ್ಲ, ಪ್ರೀತಿ ಬೆಳೆಸಿ ವಸ್ತು ಮೇಲಲ್ಲ. .....ಕೇಶವ

#ಬಂದ್ರು ಮೋದಿ, ಬಿಡ್ರೀ ಹಾದಿ

# ಬಂದ್ರು  ಮೋದಿ, ಬಿಡ್ರೀ ಹಾದಿ... ಆ ರಯ್ಯಾ ರಯ್ಯಾ ರಯ್ಯಾ, ತಿನ್ನೋರೆಲ್ಲ ಮಾಯ, Development ಗೆ ಪಾಯ, ತಿಂದೋರಿಗೆಲ್ಲ ಗಾಯ, ಆ ರಯ್ಯಾ ರಯ್ಯಾ ರಯ್ಯಾ ನಮ್ಮ ಮೋದಿಗೆ ಎಲ್ಲಿರೀ ಭಯ, ಎಲ್ಲರಿಗೂ ಒಂದೇ ನ್ಯಾಯ. ಜನಧನ ಬಂತು ಜನಗಳಿಗೆ, ಸಮೃದ್ಧಿ ಬಂತು ಹೆಣ್ಣು ಮಕ್ಕಳಿಗೆ. ಯೋಗ ಬಂತು ಭಾರತಕ್ಕೆ, ಯೋಗ day ಬಂತು ವಿಶ್ವಕ್ಕೆ. " ಸ್ವಚ್ಛ ಭಾರತ ಶ್ರೇಷ್ಠ ಭಾರತ " " Demonetization Demonetization " ಕಪ್ಪು ಹಣಕ್ಕೆ ಕಡಿವಾಣ,ಮುಚ್ಚಿಟ್ಟ ಹಣವೇ ಬಿಡು ಪ್ರಾಣ. ಆ ರಯ್ಯಾ ರಯ್ಯಾ ರಯ್ಯಾ ಇದು ನನ್ನ ವೈಯಕ್ತಿಕ ಅಭಿಪ್ರಾಯ. .....ಕೇಶವ

#ನಾಳೆ_ಬಿಳಿಯ_ಹಾಳೆ

# ನಾಳೆ_ಬಿಳಿಯ_ಹಾಳೆ ನಾಳೆ ಬಿಳಿಯ ಹಾಳೆ ಖಾಲಿ ಕಾಗದದಲ್ಲಿ, ಗೀಚಿ ಬಿಡು ನಿನ್ನ ಮನಸ್ಸಿನ ಮೂಲೆಯಲ್ಲಿರುವ ಮಾತನ್ನು. ಗೀಚುವ ಮೌನದಲ್ಲಿ ಅಕ್ಷರಗಳ ನಡುವೆ ಮುಚ್ಚಿಡಬೇಡ ನೀ ಹೇಳಲಾಗದ ಮಾತನ್ನು. ನಾಳೆ ಬಿಳಿಯ ಹಾಳೆ. ....ಕೇಶವ

#ಅಮಾವಾಸ್ಯೆ

# ಅಮಾವಾಸ್ಯೆ_special ಓ ಅಮಾವಾಸ್ಯೆ ನಿನಗೆಷ್ಟು ದೋಷ, ಕತ್ತಲಲ್ಲೇ ಮುಳುಗಿರುವೆ ನೀನು. ಮಕ್ಕಳು ಬಿದ್ದರು ನಿನಗೇ ಬೈಗುಳ, ಆ ರಾತ್ರಿಗೆ ಮೈ ಒಡ್ಡಲು ಎಲ್ಲರಿಗೂ ಕಳವಳ. ದುಷ್ಟ ನಾಶಕ್ಕೂ ಆ ರಾತ್ರಿ ಬೇಕು, ದುಷ್ಟರಿಗೂ ಆ ರಾತ್ರಿಯೇ ಬೇಕು. ಹುಣ್ಣಿಮೆಗಿಂತ ಹದಿನೈದು ದಿನ ಚಿಕ್ಕವನಾದ ನಿನಗೆ, ಜವಾಬ್ದಾರಿಗಳ ಸುರಿಮಳೆ. ಯಾರಿಗೇ ಬಿದ್ದರು ಏಟು, ಎಲ್ಲರೂ ಮಾಡುವರು ನಿನ್ನೆಡೆಯೇ ಬೆಟ್ಟು. .....ಕೇಶವ

#ಬಿಳಿನೊರೆ

# ಬಿಳಿನೊರೆ ಬಂದೇ ಬಿಡ್ತು Election, ನೀ ಮಾಡಿದ್ ಸಾಕು collection, ನಿನ್ನ graphಗೆ ಮಾಡು correction. ನಡೀಲಿ ಗೋವಿಂದ ನಡೀಲಿ ಗೋವಿಂದ ರೋಡು ರಿಪೇರಿ ಯರ್ರಾಬಿರ್ರೀ!! ಗುಂಡಿ ಮುಚ್ಚು ತರ್ರಾವರಿ!! ಎಲ್ಲೆಲ್ ನೋಡುದ್ರು JCB!! ಕಡೆಗಳಿಗೇಲಿ ಸಿಗುವುದು ಜನರ ಬಾಯಿಗೆ ಜಿಲೇಬಿ. ಹೇಳುವೆ ಕೇಳು ಓ ಗೆಳೆಯ... Vote ಮಾಡುವ ಮುನ್ನ ಯೋಚನೆ ಮಾಡು ಯಾರಿಗೆ ಮಾರುವೆ ನಿನ್ನನ್ನ!! Vote ಮಾಡಿದ ಮೇಲೆ ಯೋಚನೆ ಮಾಡಿದರೆ ಸಿಗುವುದು ನಿನಗೆ ಬಿಳಿ ನೊರೆ!! .... ಕೇಶವ