ರಾತ್ರಿ ಕಂಡ ಕನಸು ಹಗಲಾಗುವುದರಲ್ಲಿ
ಏಕೋ ಮರೆತೆ,
ಹಗಲು ಕಂಡ ಕನಸು ನನಸಾಗುವ ಮುನ್ನ ಏಕೋ ಸರಿದೆ.
ಏಕೋ ಮರೆತೆ,
ಹಗಲು ಕಂಡ ಕನಸು ನನಸಾಗುವ ಮುನ್ನ ಏಕೋ ಸರಿದೆ.
ಈಗ ಪರರ ಕನಸಿನ ಕಟ್ಟಡಕ್ಕೆ ಇಟ್ಟಿಗೆಯಾದೆ,
ಆ ಕಟ್ಟಡದೊಳಗೆ ನನ್ನ ಕನಸು ಕಾಣಲು ಪ್ರಯತ್ನಿಸಿದೆ.
ಆ ಕಟ್ಟಡದೊಳಗೆ ನನ್ನ ಕನಸು ಕಾಣಲು ಪ್ರಯತ್ನಿಸಿದೆ.
ನನ್ನ ಕನಸು ಈಡೇರುವ ಮುನ್ನವೇ ಕಟ್ಟಡ ಕುಸಿದಿದೆ,
ನಾ ಕಂಡ ಕನಸು ಚೂರಾಗಿದೆ, ಚೂರಾದ ಕನಸಿನಲ್ಲಿದ್ದ ಆಪ್ತರ ಕನಸು ಅಸುನೀಗಿದೆ.
ನಾ ಕಂಡ ಕನಸು ಚೂರಾಗಿದೆ, ಚೂರಾದ ಕನಸಿನಲ್ಲಿದ್ದ ಆಪ್ತರ ಕನಸು ಅಸುನೀಗಿದೆ.
-ಕೇಶವ
Comments
Post a Comment