Skip to main content

Posts

Showing posts from September, 2017

ಐಟಿ_ದಾಳಿ

ದಾಳಿ ದಾಳಿ ದಾಳಿ ದಾಳಿ IT ದಾಳಿ.... ಬಿಡುಸ್ತಾ ಅವ್ರೆ ಮೆಟ್ಕೊಂಡಿದ್ದ ಹುಚ್ಚು ಗಾಳಿ. ಯಾಕ್ರೋ ಬೇಕು ನಿಮ್ಗೆ ಅಷ್ಟು ಕಾಸು, ನೋಡ್ತಾ ಅವ್ನೆ ಮೇಲ್ ಕೂತ್ಕೊಂಡು ನಮ್ಮ ಬಾಸು. ತಗ್ಗಿ ಬಗ್ಗಿ ನಡುದ್ರೆ ನೀವು Fullu ಕ್ಲಾಸು, ಇಲ್ಲ ಅಂದ್ರೆ ಟೋಟಲ್ ಲಾಸ್ಸು... ಟೋಟಲ್ ಲಾಸ್ಸು ಮಗಾ ಕೇಶವ....

ಸಾರಾಯಿ_ನೀ ಸಾಯಿ

ಕುಡಿಯುವುದು ನನ್ನ ಚಟ ಬಿಡಿಸುವುದು ನಿನ್ನ ಹಠ ಮಕ್ಕಳಿಗೆ ನಮ್ಮಿಬ್ಬರ ಜಗಳದೂಟ ಹೆತ್ತವರಿಗೆ ಪ್ರಾಣ ಸಂಕಟ ನೆರೆಯವರಿಗೆ ಕಾಟ, ಕೆಲವರಿಗೆ ಮನರಂಜನೆಯ ನೋಟ ಸರ್ವರೋಗಕ್ಕೆ ಸಾರಾಯಿ ಮದ್ದು ಹೆಂಡತಿ ಮಕ್ಕಳಿಗೆ ವನವಾಸದ ಗುದ್ದು. ..ಕೇಶವ

ಹೊಸ_ದಿಗಂತ

ಹೇಳಿದ್ದೆ ಹೇಳಿ, ಹೇಳಿದ್ದೆ ಹೇಳಿ, ಕಾಲ ಕಳಿಬೇಡಿ, ಮಾಡಿದ್ದೆ ಮಾಡಿ, ಮಾಡಿದ್ದೆ ಮಾಡಿ, ಜೀವನ ಸವೆಸಬೇಡಿ. ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕ್ಕೊಬೇಡಿ, ಅತ್ತೆ ಮಾವನ ಆಸ್ತಿಗೆ ಕಾಯ್ಕೊಂಡು ಕೂರ್ಬೇಡಿ. ಹೂಡಿ ಹೊಸ ದಿಕ್ಕಿನತ್ತ ಪಯಣ, ನೋಡಿ ಹೊಸ ದಿಗಂತದ ಕಿರಣ. ನಿಮ್ಮ ಹೊಸ ಯೋಜನೆಯ ಶಂಖು ಸ್ಥಾಪನೆ ಇಂದೇ ಮಾಡಿ, ಹೆದರಬೇಡಿ, ಮನಸ್ಸಿದ್ದರೆ ಮಾರ್ಗ, ಕನಸಿದ್ದರೆ ಸ್ವರ್ಗ. ಹೊದಿಸದಿರಿ ನಿಮ್ಮ ಕನಸಿಗೆ ಜವಾಬ್ದಾರಿಯ ಶಾಲು, ಉಸಿರಾಡಲು ಬಿಡಿ. ಅದು ತೆರೆದೀತು ನಿಮಗೆ ಹೊಸ ದಿಗಂತದ ಮಜಲು. ಹೂಡಿ ಹೊಸ ದಿಕ್ಕಿನತ್ತ ಪಯಣ, ನೋಡಿ ಹೊಸ ದಿಗಂತದ ಕಿರಣ. ......ಕೇಶವ

ಬಿದ್ದ ಮರದ ತಪ್ಪೇನು

ಬಿದ್ದ ಮರದ ತಪ್ಪೇನು, ಬೇರಿಲ್ಲದ ಮರ ಊರುವುದಾದರು ಎಷ್ಟು ದಿನ? ಗಾಳಿಯ ನೆಪ ಸಾಕು ಧರೆಗುರುಳಲು. ಇಷ್ಟು ದಿನ ನೆರಳಾಗಿದ್ದ ಮರ ಹೊರಳುವ ಮೊದಲು ಉರುಳಾಯಿತೇ? ಕೊಂದ ಪಾಪಕ್ಕೆ ಗುರಿಯಾಯಿತೇ? ವಿಧಿ ಮಾಡಿದ ಸಂಚಿಗೆ ಮರವೂ ಸೇರಿ ಹೋಯಿತು ಹಲವರ ಪ್ರಾಣ. ಹಣೆ ಬರಹ ಮರಕ್ಕೂ ಇದೆಯೇ? ಅದಕ್ಕೆ ಹೊರಬೇಕಾಯಿತೇ ಈ ಹೊಣೆ? 😞 😥 😥 ...ಕೇಶವ