ಹೇಳಿದ್ದೆ ಹೇಳಿ, ಹೇಳಿದ್ದೆ ಹೇಳಿ, ಕಾಲ ಕಳಿಬೇಡಿ,
ಮಾಡಿದ್ದೆ ಮಾಡಿ, ಮಾಡಿದ್ದೆ ಮಾಡಿ, ಜೀವನ ಸವೆಸಬೇಡಿ.
ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕ್ಕೊಬೇಡಿ,
ಅತ್ತೆ ಮಾವನ ಆಸ್ತಿಗೆ ಕಾಯ್ಕೊಂಡು ಕೂರ್ಬೇಡಿ.
ಅತ್ತೆ ಮಾವನ ಆಸ್ತಿಗೆ ಕಾಯ್ಕೊಂಡು ಕೂರ್ಬೇಡಿ.
ಹೂಡಿ ಹೊಸ ದಿಕ್ಕಿನತ್ತ ಪಯಣ,
ನೋಡಿ ಹೊಸ ದಿಗಂತದ ಕಿರಣ.
ನೋಡಿ ಹೊಸ ದಿಗಂತದ ಕಿರಣ.
ನಿಮ್ಮ ಹೊಸ ಯೋಜನೆಯ ಶಂಖು ಸ್ಥಾಪನೆ ಇಂದೇ ಮಾಡಿ,
ಹೆದರಬೇಡಿ, ಮನಸ್ಸಿದ್ದರೆ ಮಾರ್ಗ, ಕನಸಿದ್ದರೆ ಸ್ವರ್ಗ.
ಹೆದರಬೇಡಿ, ಮನಸ್ಸಿದ್ದರೆ ಮಾರ್ಗ, ಕನಸಿದ್ದರೆ ಸ್ವರ್ಗ.
ಹೊದಿಸದಿರಿ ನಿಮ್ಮ ಕನಸಿಗೆ ಜವಾಬ್ದಾರಿಯ ಶಾಲು, ಉಸಿರಾಡಲು ಬಿಡಿ.
ಅದು ತೆರೆದೀತು ನಿಮಗೆ ಹೊಸ ದಿಗಂತದ ಮಜಲು.
ಅದು ತೆರೆದೀತು ನಿಮಗೆ ಹೊಸ ದಿಗಂತದ ಮಜಲು.
ಹೂಡಿ ಹೊಸ ದಿಕ್ಕಿನತ್ತ ಪಯಣ,
ನೋಡಿ ಹೊಸ ದಿಗಂತದ ಕಿರಣ.
ನೋಡಿ ಹೊಸ ದಿಗಂತದ ಕಿರಣ.
......ಕೇಶವ
Comments
Post a Comment