Skip to main content

ಬಿದ್ದ ಮರದ ತಪ್ಪೇನು

ಬಿದ್ದ ಮರದ ತಪ್ಪೇನು,
ಬೇರಿಲ್ಲದ ಮರ ಊರುವುದಾದರು ಎಷ್ಟು ದಿನ?
ಗಾಳಿಯ ನೆಪ ಸಾಕು ಧರೆಗುರುಳಲು.
ಇಷ್ಟು ದಿನ ನೆರಳಾಗಿದ್ದ ಮರ ಹೊರಳುವ ಮೊದಲು ಉರುಳಾಯಿತೇ? ಕೊಂದ ಪಾಪಕ್ಕೆ ಗುರಿಯಾಯಿತೇ?
ವಿಧಿ ಮಾಡಿದ ಸಂಚಿಗೆ ಮರವೂ ಸೇರಿ ಹೋಯಿತು ಹಲವರ ಪ್ರಾಣ.
ಹಣೆ ಬರಹ ಮರಕ್ಕೂ ಇದೆಯೇ? ಅದಕ್ಕೆ ಹೊರಬೇಕಾಯಿತೇ ಈ ಹೊಣೆ?😞😥😥
...ಕೇಶವ

Comments

Popular posts from this blog

ಕಾಗೆ ನೀ ಎಲ್ಲಿಗೆ ಹೋದೆ ಸುಮ್ಮನೆ ಹಾಗೆ

ಕಾಗೆ ನೀ ಎಲ್ಲಿಗೆ ಹೋದೆ ಸುಮ್ಮನೆ ಹಾಗೆ.. ಪಕ್ಷ ಬಂದರೆ ಬರಿ ನಿನ್ನಯ ಕೂಗೆ, ಇಲ್ಲದಿದ್ದರೆ ನೀ ಇದ್ದರು ಇಲ್ಲದ ಹಾಗೆ, ನಿನ್ನ ಬಣ್ಣ ಕಪ್ಪು ಅದರಲ್ಲೇನಿದೆ ನಿನ್ನ ತಪ್ಪು? ನೀ ಮನೆಮುಂದೆ ಕೂಗಿದರೆ ನೆಂಟರು ಬಂದಹಾಗೆ, ನೀ ನೆತ್ತಿಯ ಮೇಲೆ ಕುಟುಕಿದರೆ ಮನೆಮುಂದೆಯೇ ಹೊಗೆ. ಹಾಗೆ ಹೀಗೆ.... ಕಾಗೆ ನೀ ಎಲ್ಲಿಗೆ ಹೋದೆ ಸುಮ್ಮನೆ ಹಾಗೆ... ಮೋಬೈಲ್ ತರಂಗಗಳಿಗೆ ಸೋತು ಹೋದೆಯೋ, ವಿದ್ಯುತ್ ತಂತಿಗಳ ಮೇಲೆ ಸತ್ತು ಹೋದೆಯೋ, ನೀರಿಲ್ಲದೆ ನಿತ್ರಾಣನಾಗಿ ಹೋದೆಯೋ, ಕಾಗೆ ನೀ ಎಲ್ಲಿಗೆ ಹೋದೆ ಸುಮ್ಮನೆ ಹಾಗೆ..... -ಕೇಶವ (ಕೆ.ಪಿ)

#ವೃದ್ದಾಪ್ಯ.

# ವೃದ್ದಾಪ್ಯ . ಆಯಿತು ವಯಸ್ಸು, ಮಾಗಿತು ಮನಸು, ಕರಗಿತು ಕನಸು, ಎಲ್ಲಿ ಹೋಯಿತು ಆ ನನ್ನ ಕೂಸು, ಅರಸಿ ಹೊರಟಿತೇ ಕಾಸು!! ಈ ಮುಪ್ಪಿಗೆ ಬೇಕಂತೆ ನಿನ್ನ ಅಪ್ಪುಗೆ, ಈ ವೃದ್ದಾಪ್ಯ ಬಯುಸುತಿದೆ ನಿನ್ನ ಸಾನಿಪ್ಯ ಎಲ್ಲಿರುವೆ, ಹೇಗಿರುವೆ, ಬಂದು ಬಿಡು ಮಗು, ಕಾಣಬೇಕೆನಿಸುತಿದೆ ನಿನ್ನ ಮುದ್ದು ನಗು. ಬಿಟ್ಟು ಬಿಡು ಆ ವಿದೇಶದ ಒಲವು, ಸೇರಿ ನಲಿಯೋಣ ಸಾಯುವ ಮುನ್ನ ಗಂಟೆಗಳಾದರು ಕೆಲವು. ಕೇಳಿಸುತ್ತಿಲ್ಲವೇ ನಿನಗೆ ಈ ಕರುಳಿನ ಕರೆ, ಕಾಯುತಿರುವೆ ನಿನಗಾಗಿ ಬಿಗಿಹಿಡಿದು ಉಳಿದಿರುವ ಈ ಉಸಿರಿನ ಕೊರೆ. --ಕೇಶವ

#ಜಿಜ್ಞಾಸೆ

# ಜಿಜ್ಞಾಸೆ ಪ್ರಾಣ ಹಿಂಡುತಿದೆ ಕಾಣದ ಕೈಗಳು, ಹೃದಯ ಕಲಕುತಿದೆ ಮರೆಯದ ನೆನಪುಗಳು. ಕನಸು ತಿವಿಯುತಿದೆ ತೀರದ ಆಸೆಗಳು, ಇರುವುದನ್ನು ಇಷ್ಟಪಡಲೇ? ಸಿಗದುದ್ದಕ್ಕೆ ಕಷ್ಟಪಡಲೇ?.... .....ಕೇಶವ