ಆಯಿತು ವಯಸ್ಸು,
ಮಾಗಿತು ಮನಸು,
ಕರಗಿತು ಕನಸು,
ಮಾಗಿತು ಮನಸು,
ಕರಗಿತು ಕನಸು,
ಎಲ್ಲಿ ಹೋಯಿತು ಆ ನನ್ನ ಕೂಸು,
ಅರಸಿ ಹೊರಟಿತೇ ಕಾಸು!!
ಅರಸಿ ಹೊರಟಿತೇ ಕಾಸು!!
ಈ ಮುಪ್ಪಿಗೆ ಬೇಕಂತೆ ನಿನ್ನ ಅಪ್ಪುಗೆ,
ಈ ವೃದ್ದಾಪ್ಯ ಬಯುಸುತಿದೆ ನಿನ್ನ ಸಾನಿಪ್ಯ
ಎಲ್ಲಿರುವೆ, ಹೇಗಿರುವೆ, ಬಂದು ಬಿಡು ಮಗು,
ಕಾಣಬೇಕೆನಿಸುತಿದೆ ನಿನ್ನ ಮುದ್ದು ನಗು.
ಈ ವೃದ್ದಾಪ್ಯ ಬಯುಸುತಿದೆ ನಿನ್ನ ಸಾನಿಪ್ಯ
ಎಲ್ಲಿರುವೆ, ಹೇಗಿರುವೆ, ಬಂದು ಬಿಡು ಮಗು,
ಕಾಣಬೇಕೆನಿಸುತಿದೆ ನಿನ್ನ ಮುದ್ದು ನಗು.
ಬಿಟ್ಟು ಬಿಡು ಆ ವಿದೇಶದ ಒಲವು,
ಸೇರಿ ನಲಿಯೋಣ ಸಾಯುವ ಮುನ್ನ ಗಂಟೆಗಳಾದರು ಕೆಲವು.
ಕೇಳಿಸುತ್ತಿಲ್ಲವೇ ನಿನಗೆ ಈ ಕರುಳಿನ ಕರೆ,
ಕಾಯುತಿರುವೆ ನಿನಗಾಗಿ ಬಿಗಿಹಿಡಿದು ಉಳಿದಿರುವ ಈ ಉಸಿರಿನ ಕೊರೆ.
ಸೇರಿ ನಲಿಯೋಣ ಸಾಯುವ ಮುನ್ನ ಗಂಟೆಗಳಾದರು ಕೆಲವು.
ಕೇಳಿಸುತ್ತಿಲ್ಲವೇ ನಿನಗೆ ಈ ಕರುಳಿನ ಕರೆ,
ಕಾಯುತಿರುವೆ ನಿನಗಾಗಿ ಬಿಗಿಹಿಡಿದು ಉಳಿದಿರುವ ಈ ಉಸಿರಿನ ಕೊರೆ.
--ಕೇಶವ
Comments
Post a Comment