ಯೋಗಿ ಇಂದ ಬಂತು ಗೋವಿಗೆ ಯೋಗ, ಕಸಾಯಿಖಾನೆಗೆ ಬೀಗ. ತ್ಯಾಗ ಜೀವಿ ಗೋವಿಗಿಲ್ಲವೆ ಚೂರು ಜಾಗ, ಬೇಗ ಹರಡಲಿ ಎಲ್ಲಾ ಕಡೆ ಇದೇ ರಾಗ
ಕಾಗೆ ನೀ ಎಲ್ಲಿಗೆ ಹೋದೆ ಸುಮ್ಮನೆ ಹಾಗೆ.. ಪಕ್ಷ ಬಂದರೆ ಬರಿ ನಿನ್ನಯ ಕೂಗೆ, ಇಲ್ಲದಿದ್ದರೆ ನೀ ಇದ್ದರು ಇಲ್ಲದ ಹಾಗೆ, ನಿನ್ನ ಬಣ್ಣ ಕಪ್ಪು ಅದರಲ್ಲೇನಿದೆ ನಿನ್ನ ತಪ್ಪು? ನೀ ಮನೆಮುಂದೆ ಕೂಗಿದರೆ ನೆಂಟರು ಬಂದಹಾಗೆ, ನೀ ನೆತ್ತಿಯ ಮೇಲೆ ಕುಟುಕಿದರೆ ಮನೆಮುಂದೆಯೇ ಹೊಗೆ. ಹಾಗೆ ಹೀಗೆ.... ಕಾಗೆ ನೀ ಎಲ್ಲಿಗೆ ಹೋದೆ ಸುಮ್ಮನೆ ಹಾಗೆ... ಮೋಬೈಲ್ ತರಂಗಗಳಿಗೆ ಸೋತು ಹೋದೆಯೋ, ವಿದ್ಯುತ್ ತಂತಿಗಳ ಮೇಲೆ ಸತ್ತು ಹೋದೆಯೋ, ನೀರಿಲ್ಲದೆ ನಿತ್ರಾಣನಾಗಿ ಹೋದೆಯೋ, ಕಾಗೆ ನೀ ಎಲ್ಲಿಗೆ ಹೋದೆ ಸುಮ್ಮನೆ ಹಾಗೆ..... -ಕೇಶವ (ಕೆ.ಪಿ)
Comments
Post a Comment