# ತಾಯಿ_ಪ್ರಕೃತಿ
ಮೋಡದ ಗರ್ಭದೊಳಗೆ ಮಳೆಯ ಹುಟ್ಟು,
ಭೂಮಿಯ ಗರ್ಭದೊಳಗೆ ಬೆಳೆಯ ಹುಟ್ಟು,
ತಾಯಿಯ ಗರ್ಭದೊಳಗೆ ಜೀವದ ಹುಟ್ಟು.
ಭೂಮಿಯ ಗರ್ಭದೊಳಗೆ ಬೆಳೆಯ ಹುಟ್ಟು,
ತಾಯಿಯ ಗರ್ಭದೊಳಗೆ ಜೀವದ ಹುಟ್ಟು.
ಮಳೆ ಇಲ್ಲದೆ ಬೆಳೆ ಇಲ್ಲ,
ತಾಯಿ ಇಲ್ಲದೆ ಜೀವಿ ಇಲ್ಲ,
ತಾಯಿ ಇಲ್ಲದೆ ಜೀವಿ ಇಲ್ಲ,
ಮಳೆ ಬೆಳೆ ಇಲ್ಲದೆ ರೈತನ ಆತ್ಮಕ್ಕೆ ಸಾವು,
ಮಕ್ಕಳ ಪ್ರೀತಿ ಇಲ್ಲದೆ ತಾಯಿಯ ಆತ್ಮಕ್ಕೆ ನೋವು.
ಮಕ್ಕಳ ಪ್ರೀತಿ ಇಲ್ಲದೆ ತಾಯಿಯ ಆತ್ಮಕ್ಕೆ ನೋವು.
ನೀರು ಉಳಿಸಿ ಕಣ್ಣಿನಲ್ಲಲ್ಲ,
ಪ್ರೀತಿ ಬೆಳೆಸಿ ವಸ್ತು ಮೇಲಲ್ಲ.
ಪ್ರೀತಿ ಬೆಳೆಸಿ ವಸ್ತು ಮೇಲಲ್ಲ.
.....ಕೇಶವ
Comments
Post a Comment